sonu nigam I Love You-moggina maansu Lyrics

I Love You
ಚಿತ್ರ: ಮೊಗ್ಗಿನ ಮನಸು
ಸಾಹಿತ್ಯ: ಶಶಾಂಕ್
-------------------------------------------------------

I Love You
ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿ
ನೀನೇನೇ ಜೀವ ಎಂದು ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು ನೀ ನನ್ನ ಮರೆತರು ಏನು
ನೀನೇನೇ ಮಾಡಿದರೇನು ನಿನ್ನನ್ನೇ ಮರೆಯುವೆ ಏನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು
I Love You...(noorau)1

ನೀನು ಇರದೇ ಬದುಕುವುದನ್ನು ಕಲಿಯುವ ಸಾಹಸದಲ್ಲಿ
ನಿನ್ನ ನೆನಪೇ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ, ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ
I Love You...

ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೊನೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು, ದೂರಲಾರೆ ನಿನ್ನೆಂದು
ನಿನ್ನ ನೆನಪಾ ಬಂಧನದಲ್ಲೇ ಸಾಯುವವರೆಗೂ ಕಾಯುವೆನೆ

See also:

56
56.80
Lúcido Como en casa Lyrics
Lustra Wild One Lyrics