Neera Bittu Nelada Mele Lyrics
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು,
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ,ನನ್ನ ಬಿಟ್ಟು ನಿನ್ನಾ
ಜೀವನ ಸಾಗದು,ಜೀವನ ಸಾಗದು.
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು...
ಸೂರ್ಯ ಬರದೆ ಕಮಲವೆಂದು ಅರಳದು,
ಚಂದ್ರನಿರದೆ ತಾರೆ ಎಂದು ನಲಿಯದು.
ಸೂರ್ಯ ಬರದೆ ಕಮಲವೆಂದು ಅರಳದು,
ಚಂದ್ರನಿರದೆ ತಾರೆ ಎಂದು ನಲಿಯದು.
ಒಲವು ಮೂಡದಿರಲು ಮನವು ಅರಳದು,
ಮನವು ಅರಳದಿರಲು ಗೆಲುವು ಕಾಡದು .
ಮನವು ಅರಳದಿರಲು ಗೆಲುವು ಕಾಡದು ...
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು,
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ,ನನ್ನ ಬಿಟ್ಟು ನಿನ್ನಾ
ಜೀವನ ಸಾಗದು,ಜೀವನ ಸಾಗದು.
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು...
ಲೋಕದಲ್ಲಿ ಗಂಡು ಹೆಣ್ಣಿಗಾಸರೆ,
ಆದರಿಲ್ಲಿ ನಾನು ನಿನ್ನಾ ಕೈಸೆರೆ.
ಲೋಕದಲ್ಲಿ ಗಂಡು ಹೆಣ್ಣಿಗಾಸರೆ,
ಆದರಿಲ್ಲಿ ನಾನು ನಿನ್ನಾ ಕೈಸೆರೆ.
ಕೂಡಿ ನಲಿವ ಆಸೆ ಮನದಿ ಕಾದಿದೆ,
ಹಿತವು ಎಲ್ಲಿ ನಾವು ಬೇರೆ ಆದರೆ?
ಹಿತವು ಎಲ್ಲಿ ನಾವು ಬೇರೆ ಆದರೆ?
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು,
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ,ನನ್ನ ಬಿಟ್ಟು ನಿನ್ನಾ
ಜೀವನ ಸಾಗದು,ಪಾವನ ಆಗದು.
See also:
JustSomeLyrics
109
109.95
aventura bachata - enseñame a olvidar450 Lyrics
Mistikal Shake Your Ass Lyrics